Thursday, February 4, 2010

೭೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಬಿಸಿಲ ನಾಡ ಜಾತ್ರೆಗೆ ನಿಮಗಿದೋ ಆತ್ಮೀಯ ಸ್ವಾಗತ

ಆತ್ಮಿಯರೇ,
ನಮ್ಮೂರ "ಬಿಸಿಲ ಜಾತ್ರೆ" ಅರ್ಥಾರ್ಥ ಗದಗನಲ್ಲಿ ನಡೆಯುವ "೭೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ" ಸಮ್ಮೇಲನಕ್ಕೆ
ಬರುತ್ತಿರುವ ನಿಮಗೆ ನನ್ನ ನೆಲದ ಎಲ್ಲ ಹಿರಿಯ, ಓರಿಗೆಯ, ಕಿರಿಯ ಬರಹಗಾರರೊಟ್ಟಿಗೆ ಸೇರಿ ಆತ್ಮೀಯವಾಗಿ ಸ್ವಾಗತ ಕೋರುವೆ. ಅಂದಂಗ "ಕೆಲಸ ಅದಾವು ಬರಲಿಕ್ಕೆ ಆಗಂಗಿಲ್ಲ" ಅಂತ ಅನ್ಬಾಡ್ರಿ. ತಪ್ದ ಬರಬೇಕು.
ಹಂಗ ಬರಬಾಡ್ರಿ ಮತ್ತ. ನಿಮ್ಮ ಜೊತೆಗಾರರನ್ನು ಕರಕೊಂಡು
ಬರ್ರಿ. ನೀವು ಬರದಇಲ್ಲ ನಿಮ್ಮ ಗೆಳೆಯ ಇಲ್ಲ ಗೆಳತಿ ಬರದಿದ್ದ ಪುಸ್ತಕ ತಂಬರ್ರಿ
ತುಸು ಬಿಸಿಲಿದೆ. ಅಷ್ಟೇನಿಲ್ಲ. ಹೊಂದ್ಕೊತಿರಿ.
ಇಲ್ಲಿಗೆ ಕರಕೊನ್ದುಟ್ರೈನ್ ಬಸ್ಸನ ಅನುಕೂಲ ಇದೆ.
ಗದಗ ಸಿಟಿ ನೋಡಲಿಕ್ಕೆ ಚೆನ್ನಾಗಿದೆ.
ಮೂರು ದಿನ
ನೀವು ನಮ್ಮೊಂದಿಗೆ ಇರಬೇಕು.
ನನಗ ಕಥಿ ಬರಿಯೋ ಹುಚ್ಚು. ಒಂದಸ್ಟ ಬರದೀನಿ. ಹೆಂಗಾದಾವೋ ಗೊತ್ತಿಲ್ಲ. ನೀವ ಓದಿ ಹೇಳಬೇಕು.
ಸಾಹಿತ್ಯ ಅಂದ್ರ ಬರಿ ಬರಿಯುದಲ್ಲ ಇದು
ನಿಮಗೂ ಗೊತ್ತು. ಸಾಹಿತ್ಯ ನಮಗ ಬರಿಯಾಕ ಹಚ್ಚತ್ತ. ಮತ್ತ ಒಂದು ಸಂಬಂಧಾ ಕಟ್ಟಿ ಕೊಡುತ್ತ. ಅದ್ಕ ಈ ಸಂದರ್ಭದಲ್ಲಿ ನಾವು ನೀವು ಸೇರಬೇಕಿದೆ ಅಲಾ ?
ಏನೇ ಇರಲಿ ನೀವು ತಪ್ಪದೆ ನಮ್ಮೂರಿನ ಬಿಸಿಲ ತೇರಿಗೆ ಬರಬೇಕು.
ನಿಮಗಾಗಿ ನಾವು ಕಾಯ್ತಿರ್ತಿವಿ.
ಗದಗ್ನಿಂದ ನಮ್ಮ ಊರು ಅಂದ್ರ ಕುಂಟೋಜಿಗೆ ೫೫ ಕಿ ಮಿ ದೂರ ಇದೆ. ಸಾದ್ಯ ಆದ್ರೆ ನಮ್ಮೂರಿಗೆ ಹೋಗಿ ಬರುನ್ರಿ.
ಅಂದಂಗ ಇಲ್ಲಿ ಊಟ ನಿಮಗ ಗೊತ್ತಲ್ಲ? ಕಡಕ್ ರೊಟ್ಟಿ. ನಾನಾತರ ಪಲ್ಯ. ಮತ್ತ ಗುರೆಳ್ಳ ಪುಡಿ.
ಗದಗನಲ್ಲಿ ಪ್ರಕಾಶನಗಳ ಸಂಖ್ಯೆ ಹೆಚ್ಚು. ಬಂದ್ರ ಒಂದಸ್ಟ ಪ್ರಕಾಶನ ಗಳನ್ನ ಪರಿಚಯ ಮಾಡ್ಕೋ ಬಹುದು.
ನನ್ನಂತಹ ಅದೆಷ್ಟೋ ಯುವ ಬರಹಗಾರರನ್ನು ಬರಹ ಲೋಕಕ್ಕೆ ತಂದಂತಹ ಹಿರಿಯ ಬರಹಗಾರರು ನಮ್ಮೊಂದಿಗೆ ಸೇರುವ ಸಮಯ ಇದಾಗಿದೆ.
ಇನ್ನೊಂದು ವಿಶೇಷತೆ ಅಂದ್ರ. ನನ್ನ ಜಿಲ್ಲೆಯ ಹಿರಿಯ ಓರಿಗೆಯ, ಕಿರಿಯ ಬರಹಗಾರರೊಂದಿಗೆ ಈ ಸಮ್ಮೇಳನ ಮುಖಾಂತರ ಸೇರುವುದು ನನಗೆ ಖುಷಿ ನೀಡಿದೆ.
ನಿಮಗ ಏನಾದ್ರೂ ಇನ್ನು ಹೆಚ್ಚಿನ ಮಾಹಿತಿ ಬೇಕಿತ್ತಂದ್ರ ನನಗ ಅಷ್ಟ ಅಲ್ಲ ನನ್ನ ಗೆಳೆಯರಿಗೂ ಕಾಲ್ ಮಾಡಿ.
ಮತ್ತೆನ ಯೋಚನೆ ಮಾಡಬೇಡಿ. ಜಾತ್ರೆಗೆ ಬರೋ ತಯಾರಿ ಮಾಡಕೋರಿ.
ಬರ್ರಿ ಜಾತ್ರೆಯಲ್ಲಿ ಸೇರೋಣ.

No comments:

Post a Comment